ಸುಂದರ್ ರಾಜ್ ಭಾರತದ ಚಲನಚಿತ್ರ ನಟ. ಸುಂದರ್ ರಾಜ್ ನಟಿಸಿರುವ ಕೆಲವು ಗಮನಾರ್ಹ ಚಿತ್ರಗಳೆಂದರೆ ಕುರಿಗಳು ಸಾರ್ ಕುರಿಗಳು(೨೦೦೧),ಮತದಾನ(೨೦೦೧),ಆಕಸ್ಮಿಕ(೧೯೯೩). = ವೈಯಕ್ತಿಕ ಜೀವನ = ಸುಂದರ್ ರಾಜ್ ಅವರು ಪ್ರಮೀಳಾ ಜೋಷಾಯಿರವರನ್ನು ಮದುವೆಯಾಗಿದ್ದಾರೆ.ಇವರಿಬ್ಬರಿಗೆ ಒಬ್ಬಳು ಮಗಳಿದ್ದಾಳೆ.ಅವಳ ಹೆಸರು ಮೇಘನಾ ರಾಜ್.ಪ್ರಮೀಳಾ ಜೋಷಾಯಿ ಮತ್ತು ಮೇಘನಾ ರಾಜ್ ಇಬ್ಬರೂ ಕನ್ನಡ ಚಲನಚಿತ್ರ ರಂಗದ ನಟಿಯರಾಗಿದ್ದಾರೆ. ಮೇಘನಾರವರು ಹಲವು ಮಲಯಾಳಂ ಹಾಗೂ ಕೆಲವು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. = ಉದ್ಯೋಗ = ಸುಂದರ್ ರಾಜ್ ಕನ್ನಡದಲ್ಲಿ ಸುಮಾರು ೧೮೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಫೋಷಕ ಪಾತ್ರಗಳಲ್ಲಿ ಕಾಣಿಸುತ್ತಿದ್ದ ಅವರು ಕೆಲವು ಚಿತ್ರಗಳಲ್ಲಿ ಖಳನಾಯಕನಾಗಿಯೂ ಅಭಿನಯಿಸಿದ್ದಾರೆ. ಅವರು ಕನ್ನಡ ಸಿನೆಮಾ ಅಸೋಸಿಯೇಷನ್ನಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. = ಚಲನಚಿತ್ರಗಳು = ಸ್ಟೈಲ್ ಕಿಂಗ್(೨೦೧೬) ಆಟಗಾರ(೨೦೧೫) ರಾವಣ(೨೦೦೯) ಸಮರಸಿಂಹ ನಾಯ್ಕ(೨೦೦೫) ನ್ಯಾಯಕ್ಕಾಗಿ ಸವಾಲ್(೧೯೯೪) ವಿಜಯ ಕ್ರಾಂತಿ(೧೯೯೩) ಮನ ಗೆದ್ದ ಮಗ(೧೯೯೨) ಗಗನ(೧೯೮೯) ಬದ್ರಕಾಳಿ(೧೯೮೭) ಸಂಸಾರದ ಗುಟ್ಟು(೧೯೮೬) ಒಂದೇ ರಕ್ತ(೧೯೮೪) ನನ್ನ ದೇವರು(೧೯೮೨) ಇಮ್ಮಡಿ ಪುಲಿಕೇಶಿ(೧೯೬೭) = ಉಲ್ಲೇಖಗಳು =